ಪನಾಮಾ ನಗರ 2 -
ಅಮೆರಿಕ ಸಂಯುಕ್ತ ಸಂಸ್ಥಾನಗಳ ಫ್ಲಾರಿಡ ರಾಜ್ಯದ ಬೇ ಕೌಂಟಿಯ ಆಡಳಿತ ಕೇಂದ್ರ ಹಾಗೂ ರೇವು ಪಟ್ಟಣ.  ಸೆಂಟ್ ಆಂಡ್ರ್ಯ ಕೊಲ್ಲಿಯಲ್ಲಿದೆ.  1765ರಲ್ಲಿ ಸಣ್ಣ ಗ್ರಾಮವಾಗಿ ಸ್ಥಾಪಿತವಾದ ಸೇಂಟ್ ಆಂಡ್ರ್ಯೂ ಗ್ರಾಮ 1909ರಲ್ಲಿ ಪನಾಮಾ ನಗರ ಎಂಬ ಹೆಸರು ಪಡೆಯಿತು.  ಅಮೆರಿಕನ್ ಕ್ರಾಂತಿಯುದ್ಧ ಕಾಲದಲ್ಲಿ ಟೋರಿ ಪಕ್ಷದವರು ಈ ನಗರದಲ್ಲಿ ನೆಲೆಸಿ ನೀಲಿ ಗಿಡಗಳ ಪ್ಲಾಂಟೇಷನ್‍ಗಳನ್ನು ಹಾಗೂ ಮರಕೊಯ್ಯುವ ಕಾರ್ಖಾನೆಗಳನ್ನು ಸ್ಥಾಪಿಸಿದರು.  ಎರಡನೆಯ ಮಹಾಯುದ್ಧದ ಕಾಲದಲ್ಲಿ (1939-45)  ಪನಾಮಾ ನಗರ ಹಡಗು ತಯಾರಿಕೆಯ ಕೇಂದ್ರವಾಯಿತು. ಕೈಗಾರಿಕೆಗಳಿಂದ ಜನಸಂಖ್ಯೆ ಹಬ್ಬಿತು.  ಮೀನುಗಾರಿಕೆ, ಕಾಗದ ಹಾಗೂ ರಾಸಾಯನಿಕ ವಸ್ತುಗಳ ತಯಾರಿಕೆ ಇವು ಪ್ರಮುಖ ಉದ್ಯಮಗಳು.  ಮೆಕ್ಸಿಕೋ ಕೊಲ್ಲಿಯ ತೀರದಲ್ಲಿ ಸಂಚರಿಸುವ ಹಡಗುಗಳಿಗೆ ಪನಾಮಾ ರೇವು ಅನುಕೂಲವಾದ ನಿಲ್ದಾಣ.  ನಗರಕ್ಕೆ ಸಮೀಪದಲ್ಲಿ ಟಿಂಡಲ್ ವಿಮಾನದಳ ಕೇಂದ್ರವಿದೆ. ಪಟ್ಟಣದ ಗಲ್ಫ್ ಕೋಸ್ಟ್ ಜೂನಿಯರ್ ಕಾಲೇಜು 1957ರಲ್ಲಿ ಸ್ಥಾಪಿತವಾಯಿತು.  ಪಟ್ಟಣದ ಜನಸಂಖ್ಯೆ 32,096 (1970).
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ